ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರ
1. ಲೋಕಲ್ ಫಂಡ್
ಸಮಿತಿಯಲ್ಲಿ ಆಡಳಿತ ಘಟಕವನ್ನಾಗಿ “ ಜಿಲ್ಲೆ” ಯನ್ನು ಸೃಜಿಸಲಾಯಿತು.
2. ಮೈಸೂರು
ಸಂಸ್ಥಾನದಲ್ಲಿ ಮೊದಲ ಭಾರಿಗೆ ಆಡಳಿತ ವಿಕೇಂದ್ರೀಕರಣವನ್ನು “ 1884 “ ರಲ್ಲಿ ಜಾರಿಗೆ ತರಲಾಯಿತು.
3. “ಜಿಲ್ಲಾ” ಮಟ್ಟದಲ್ಲಿ “ ಆಡಳಿತ” ಸುಗಮ ನಿರ್ವಹಣಗಾಗಿ ಲೋಕಲ್ ಫಂಡ್ ಸಮಿತಿ
ಅಸ್ತಿತ್ವಕ್ಕೆ ಬಂದಿತು.
4. ಲೋಕಲ್ ಫಂಡ್
ಸಮಿತಿಯು ವರ್ಷಕ್ಕೆ “
ಎರಡು ” ಬಾರಿ ಸಭೆ ಸೇರುತಿತ್ತು.
5. ಲೋಕಲ್ ಫಂಡ್
ಸಮಿತಿ ಸಮಿತಿಯ ಅಧ್ಯಕ್ಷರಾಗಿ “
ಜಿಲ್ಲಾಧಿಕಾರಿಗಳು ” ಇದ್ದರು.
6. ಲೋಕಲ್ ಫಂಡ್
ಸಮಿತಿಯು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಿ “ ಪ್ರಾಂತೀಯ ಸರ್ಕಾರಕ್ಕೆ ” ಸಲಹೆಯನ್ನು ನೀಡುತಿತ್ತು.
7. ಸರ್ಕಾರದಿಂದ ನಾಮ ನಿರ್ದೇಶನಗೊಂಡ ಆರು ಮಂದಿ
ಭೂ ಮಾಲೀಕರನ್ನು ಅಧಿಕಾರೇತರ ಸದಸ್ಯರನ್ನಾಗಿ ಲೋಕಲ್ ಫಂಡ್ ಸಮಿತಿಗೆ ನೇಮಿಸಲಾಗುತಿತ್ತು.
8. ಲೋಕಲ್ ಫಂಡ್
ಸಮಿತಿಯು ರೂ. 1000 ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲು ಅಧಿಕಾರವಿತ್ತು.
9. 1907 ರ ಭಾರತದಲ್ಲಿ
ಬ್ರಿಟೀಷ್ ಅಳ್ವಿಕೆ ಕಾಲದಲ್ಲಿ ಆಡಳಿತ ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಶಿಫಾರಸ್ಸು ನೀಡಲು “ ರಾಯಲ್ ” ಆಯೋಗವನ್ನು ಸೃಜಿಸಲಾಯಿತು.
10. 1907 ರ ಬ್ರಿಟೀಷ್ ಆಳ್ವಿಕೆಯಲ್ಲಿ ಆಡಳಿತ
ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಶಿಫಾರಸ್ಸು ನೀಡಲು “ ಸಿ. ಇ.ಹೆಚ್. ಹಬ್ ಹೌಸ್ ” ರವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಯಿತು.
11. “ 1909 ರ ಲಾಹೋರ್ ರಾಷ್ಟ್ರೀಯ ಕಾಂಗ್ರೇಸ್
ಅಧಿವೇಶನದಲ್ಲಿ“ ಗ್ರಾಮ ಪಂಚಾಯಿತಿ ಮತ್ತು ಮೇಲಿನ ಹಂತಗಳಿಗೆ
ಚುನಾಯಿತ ಮಂಡಳಿಯನ್ನು ಆರಸಬೇಕೆಂದು ಮತ್ತು ಅವುಗಳಿಗೆ ಆರ್ಥಿಕ ಬೆಂಬಲ ನೀಡಬೇಕೆಂದು ಒತ್ತಾಯಿಸುವ
ನೀರ್ಣಯವನ್ನು ಅಂಗೀಕರಿಸಲಾಯಿತು.
12. “ ಗ್ರಾಮ ಸ್ವರಾಜ್
” ಎಂಬ ಪರಿಕಲ್ಪನೆಯನ್ನು “ ಮಹಾತ್ಮ ಗಾಂಧೀಜಿ ” ಯವರು ಪ್ರತಿಪಾದಿಸಿದರು.
13. “ಸರ್ವೋದಯ” ಎಂಬ ಪದವನ್ನು “
ಮಹಾತ್ಮ ಗಾಂದೀಜಿ” ಯವರು ಪರಿಚಯಿಸಿದರು.
14. ಮಹಾತ್ಮ ಗಾಂಧೀಜಿಯವರು ಸರ್ವೋದಯ ಎಂಬ
ಪದವನ್ನು “
Un to The Last ” ಎಂಬ ಗ್ರಂಥದಿಂದ ಆಯ್ದುಕೊಂಡಿದ್ದಾರೆ.
15. “ Un to the
Last ” ಎಂಬ
ಗ್ರಂಥವನ್ನು ಬರೆದವರು “ ಜಾನ್
ರಸ್ಕಿನ್ ”.
16. ಅನ್ ಟು ದಿ ಲಾಸ್ಟ್ ಎಂಬ ಗ್ರಂಥವನ್ನು
ಗುಜರಾತಿ ಭಾಷೆಗೆ 1908 ರಲ್ಲಿ ಮಹಾತ್ಮ ಗಾಂಧೀಜಿಯವರು “ಸರ್ವೋದಯ” ಎಂಬ ಶಿರ್ಷೀಕೆಯಡಿಯಲ್ಲಿ ಭಾಷಂತರಿಸಿದರು.
17. ಜಾನ್ ರಸ್ಕಿನ್ “ ಬ್ರಿಟನ್ ” ದೇಶದ ಚಿಂತಕರು.
18. ಮಹಾತ್ಮ ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ
ಗ್ರಂಥ ಜಾನ್ ರಸ್ಕಿನ್ ರವರ “ Un to the last ”.
19. ಗ್ರಾಮಗಳ ಉದ್ದಾರವೇ ದೇಶಗಳ ಉದ್ದಾರ, ಸರ್ವರ
ಪ್ರಗತಿಯನ್ನು ಸಾಧಿಸಲು ಸರ್ವೋದಯ ಪರಿಕಲ್ಪನೆ ಬಳಕೆಯಾಗಬೇಕು ಎಂದು “ ಮಹಾತ್ಮ ಗಾಂಧೀಜಿ ”ಯವರು ಪ್ರತಿಪಾದಿಸಿದರು.
20. 1919 ರಲ್ಲಿ ಮಹಾತ್ಮ ಗಾಂಧೀಜಿಯವರು ಸ್ಥಳೀಯ
ಸಂಸ್ಥೆಗಳ ಮಹತ್ವದ ಬಗ್ಗೆ ಸ್ವರಾಜ್ ಕಲ್ಪನೆ ಬಗ್ಗೆ ತಿಳಿಸಲು ಲೇಖನಗಳನ್ನು “ ನವ ಜೀವನ ಟ್ರಸ್ಟ್ ” ಸ್ಥಾಪಿಸಿ ಪ್ರಕಟಿಸುತ್ತಿದ್ದರು.
21. 1919 ರ ಮಾಂಟೆಗೊ ಜೇಮ್ಸ್ ಫರ್ಡ್ ಸುಧಾರಣೆ
ಕಾಯಿದೆಯಲ್ಲಿ ಬ್ರಿಟೀಷರು ಸ್ಥಳೀಯ ಸ್ವಯಂ ಆಡಳಿತಕ್ಕೆ ಅವಕಾಶ ಕಲ್ಪಿಸಿದರು.
22. “ 1935 ರ ಭಾರತ ಸರ್ಕಾರ ಕಾಯ್ದೆ”ಯಲ್ಲಿ ಪಂಚಾಯಿತಿಗಳನ್ನು ಸ್ಥಳೀಯ ಸರ್ಕಾರಗಳ
ಹೊಣೆಗೆ ವಹಿಸಲಾಯಿತು.
23. ಮಹಾತ್ಮ
ಗಾಂದೀಜಿಯವರು ಸ್ಥಳೀಯ ಸರ್ಕಾರಗಳು ಮತ್ತು ಭಾರತದ ಗ್ರಾಮೀಣ ಸಮುದಾಯದ ಬಗ್ಗೆ ಸಂಬಂಧಿಸಿದಂತೆ
ಲೇಖನಗಳನ್ನು ಬರೆಯುತ್ತಿದ್ದ ಶಿರ್ಷಿಕೆ – ವಿಲೇಜ್ ಸ್ವರಾಜ್.
Comments
Post a Comment