ಸ್ವಾತಂತ್ರ್ಯ ಭಾರತದಲ್ಲಿ ಸ್ಥಳೀಯ ಸರ್ಕಾರಗಳು


1.      ಭಾರತದ ಸಂವಿಧಾನದ “ 40 ನೇ ವಿಧಿ ಪಂಚಾಯಿತಿಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಯಿತು.

2.      ಭಾರತದ ಸಂವಿಧಾನ 4ನೇ ಭಾಗ ದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ.

3.      ಭಾರತದ ಸಂವಿಧಾನದಲ್ಲಿ ಪಂಚಾಯತ್ ರಾಜ್ ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯ ನಿರ್ದೇಶಕ ತತ್ವಗಳ ವಿಷಯದ ಅಡಿಯಲ್ಲಿ ಪ್ರಸ್ತಾಪಿಸಲಾಗಿದೆ.

4.      ಸ್ವತಂತ್ರ ಭಾರತದಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯ ಕ್ರಮಗಳನ್ನು 2 ಅಕ್ಟೋಬರ್ 1952 ರಲ್ಲಿ ಆರಂಭಿಸಲಾಯಿತು.

5.       ಸ್ವತಂತ್ರ ಭಾರತದಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ವಿಸ್ತರಣಾ ಕಾರ್ಯಕ್ರಮವನ್ನು “1953” ರಲ್ಲಿ ಪ್ರಾರಂಭಿಸಲಾಯಿತು.

6.      ಬಲವಂತ್ ರಾಯ್ ಮೆಹ್ತಾ ಸಮಿತಿ ಸಮುದಾಯ ಅಭಿವೃದ್ಧಿ ಮತ್ತು ರಾಷ್ಟ್ರೀಯ ವಿಸ್ತರಣಾ ಕಾರ್ಯಕ್ರಮವನ್ನು ಅಧ್ಯಯನ ಮಾಡಲು ಮತ್ತು ಪಂಚಾಯಿತಿಗಳ ಸ್ಥಾಪನೆಗೆ ಶಿಫಾರಸ್ಸು ನೀಡಲು ನೇಮಕಗೊಂಡ ಆಯೋಗವಾಗಿದೆ.

7.      ಸ್ವತಂತ್ರ ಭಾರತದಲ್ಲಿ ಪಂಚಾಯತ್ ರಾಜ್ ಗೆ ಸಂಬಂಧಿಸಿದಂತೆ ಮೊಟ್ಟ ಮೊದಲ ಬಾರಿಗೆ ನೇಮಕಗೊಂಡ ಆಯೋಗ ಬಲವಂತ್ ರಾಯ್ ಮೆಹ್ತಾ ಸಮಿತಿ .

8.      ಬಲವಂತ್ ರಾಯ್ ಮೆಹ್ತಾ ಸಮಿತಿ ಸಮಿತಿಯನ್ನು 16 ಜನವರಿ 1957 ರಲ್ಲಿ ನೇಮಕವಾಯಿತು.

9.      ಬಲವಂತ್ ರಾಯ್ ಮೆಹ್ತಾ ಸಮಿತಿ ಅಧ್ಯಕ್ಷರು ಬಲವಂತ್ ರಾಯ್ ಜಿ ಮೆಹ್ತಾ ರವರಾಗಿದ್ದಾರೆ.

10.  ಬಲವಂತ ರಾಯ್ ಮೆಹ್ತಾ ಸಮಿತಿ ಯು “ 24 ನವೆಂಬರ್ 1957 ತನ್ನ ವರದಿಯನ್ನು ಸಲ್ಲಿಸಿತು.

11.  ಪಂಚಾಯ್ತ್ ರಾಜ್ ವ್ಯವಸ್ಥೆಯ ಮುಖ್ಯ ಗುರಿ ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿ ಇತ್ಯರ್ಥಪಡಿಸುವುದು. ಹಾಗೂ ಜನರನ್ನು ರಾಜಕೀಯವಾಗಿ ಜಾಗೃತಗೊಳಿಸುವುದು.

12.  ಭಾರತದ ಆಧುನಿಕ ಪಂಚಾಯತ್ ರಾಜ್ ಸಂಸ್ಥೆಗಳ ಪಿತಾಮಹ ಎಂದು ಬಲವಂತ ರಾಯ್ ಮೆಹ್ತಾ ಸಮಿತಿ ರವರನ್ನು ಕರೆಯುತ್ತಾರೆ.

13.  ಬಲವಂತ ರಾಯ್ ಮೆಹ್ತಾ ಸಮಿತಿ ಯು ತನ್ನ ವರದಿಯಲ್ಲಿ ಮೂರು ಹಂತದ ಪಂಚಾಯತ್ ರಾಜ್ ಸ್ಥಾಪಿಸಲು ಶಿಫಾರಸ್ಸು ಮಾಡಿತು.

14.  ಬಲವಂತ ರಾಯ್ ಮೆಹ್ತಾ ಸಮಿತಿ ಸೂಚಿಸಿದ ಗ್ರಾಮ ಮಟ್ಟ, ಬ್ಲಾಕ್ ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಮೂರು ಹಂತಗಳು ಗ್ರಾಮ ಪಂಚಾಯತ್, ಪಂಚಾಯತ್ ಸಮಿತಿ ಹಾಗೂ ಜಿಲ್ಲಾ ಪರಿಷತ್ತು.

15.  ಬಲವಂತ ರಾಯ್ ಮೆಹ್ತಾ ಸಮಿತಿ ಶಿಫಾರಸ್ಸಿನಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪರಿಷತ್ತಿನ ಮುಖ್ಯಸ್ಥರಾಗಿರುತ್ತಾರೆ.

16.  ಬಲವಂತ ರಾಯ್ ಮೆಹ್ತಾ ರವರು ಹುಟ್ಟಿದ ದಿನ ಫೆಬ್ರವರಿ 19 ನ್ನು ಕೇರಳ ರಾಜ್ಯದಲ್ಲಿ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತದೆ.

17.  ಬಲವಂತ ರಾಯ್ ಮೆಹ್ತಾ ರವರು ಗುಜರಾತ್ ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದರು.

18.  ಬಲವಂತ ರಾಯ್ ಮೆಹ್ತಾ ಸಮಿತಿ ಯು ಶಿಫಾರಸ್ಸು ಮಾಡಿದ 3 ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ 1958 ರಲ್ಲಿ ಅಂಗೀಕರಿಸಿತು.

19.  ಬಲವಂತ ರಾಯ್ ಮೆಹ್ತಾ ಸಮಿತಿ ಯ ಶಿಫಾರಸ್ಸಿನಂತೆ ಮೊದಲ ಬಾರಿಗೆ ರಾಜಸ್ಥಾನ ರಾಜ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಯನ್ನು ಅನುಷ್ಛಾನಗೊಳಿಸಲಾಯಿತು.

20.  ರಾಜಸ್ಥಾನದಲ್ಲಿ ಮೊಟ್ಟ ಮೊದಲ ಬಾರಿಗೆ 02 ಅಕ್ಟೋಬರ್ 1959 ರಲ್ಲಿ ಪಂಚಾಯತ್ ರಾಜ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

21.  ರಾಜಸ್ಥಾನದ ನಾಗೂರು ನಲ್ಲಿ ಮೊಟ್ಟ ಮೊದಲ ಬಾರಿಗೆ ಪಂಚಾಯತ್ ರಾಜ್ ಸಂಸ್ಥೆಯನ್ನು ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್  ನೆಹರೂ ರವರು ಉಧ್ಘಾಟಿಸಿದರು.

22.  ರಾಜಸ್ಥಾನದ ನಂತರ ಭಾರತದಲ್ಲಿ ಆಂದ್ರ ಪ್ರದೇಶ ರಾಜ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

23.  ಬಲವಂತ ರಾಯ್ ಮೆಹ್ತಾ ಸಮಿತಿ ಯು ರಾಜಕೀಯ ಪಕ್ಷಗಳ ಹೊರತಾಗಿ ಪ್ರತಿ 5 ವರ್ಷಗಳಿಗೊಮ್ಮೆ ನಿಜವಾದ ರೀತಿಯಲ್ಲಿ ಚುನಾವಣೆಯ ಮೂಲ ರಚಿಸಬೇಕೆಂದು ಶಿಫಾರಸ್ಸು ಮಾಡಿತು.

 

Comments

Popular posts from this blog

ಅಶೋಕ್ ಮೆಹ್ತಾ ಸಮಿತಿ

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರ