ಅಶೋಕ್ ಮೆಹ್ತಾ ಸಮಿತಿ


1.      ಕೇಂದ್ರದಲ್ಲಿ ಜನತಾ ಸರ್ಕಾರವು ಪಂಚಾಯತ್ ರಾಜ್ ಸಂಸ್ಥೆಗೆ ಸಂಬಂಧಿಸಿದಂತೆ ಡಿಸೆಂಬರ್ – 1977 ರಲ್ಲಿ – ಅಶೋಕ್ ಮೆಹ್ತಾ ಸಮಿತಿಯನ್ನು ರಚಿಸಿತು.

2.       ಅಶೋಕ್ ಮೆಹ್ತಾ ಸಮಿತಿಯು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸಲು ಆಗಸ್ಟ್ – 1978  ರಲ್ಲಿ ತನ್ನ ವರದಿಯನ್ನು ನೀಡಿತು.

3.      ಅಶೋಕ್ ಮೆಹ್ತಾ ಸಮಿತಿಯು ತನ್ನ ವರದಿಯಲ್ಲಿ 132 ಶಿಫಾರಸ್ಸುಗಳನ್ನು ಮಾಡಿತು.

4.      ಅಶೋಕ್ ಮೆಹ್ತಾ ಸಮಿತಿಯು ತನ್ನ ವರದಿಯಲ್ಲಿ ತನ್ನ ವರದಿಯಲ್ಲಿ ಎರಡು ಹಂತ ದ ಪಂಚಾಯಿತಿಗಳನ್ನು ಶಿಫಾರಸ್ಸು ಮಾಡಿತು.

5.      ಅಶೋಕ್ ಮೆಹ್ತಾ ಸಮಿತಿಯನ್ನು ನೇಮಕ ಮಾಡಿದ ಸರ್ಕಾರದಲ್ಲಿ ಪ್ರಧಾನ ಮಂತ್ರಿಗಳು – ಮೊರಾರ್ಜಿ ದೇಸಾಯಿ ರವರು ಆಗಿದ್ದರು.

6.      ಅಶೋಕ್ ಮೆಹ್ತಾ ಸಮಿತಿಯು ಎರಡು ಹಂತದ ಪಂಚಾಯತ್    ಮಂಡಲ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ .

7.      ಅಶೋಕ್ ಮೆಹ್ತಾ ಸಮಿತಿಯ ವರದಿಯಂತೆ ಬ್ಲಾಕ್ ಹಂತದ ಪಂಚಾಯಿತಿಯನ್ನು ತೆಗೆದು ಹಾಕಲಾಯಿತು.

8.      ಅಶೋಕ್ ಮೆಹ್ತಾ ಸಮಿತಿಯ ಶಿಫಾರಸ್ಸಿನಂತೆ ಮಂಡಲ ಪಂಚಾಯಿತಿಯು 15000 ರಿಂದ 20000 ಸಾವಿರ ಜನ ಸಂಖ್ಯೆ ಒಳಗೊಂಡ ಗ್ರಾಮಗಳನ್ನು ಒಳಗೊಂಡಿರಬೇಕೆಂದು ಶಿಫಾರಸ್ಸು ಮಾಡಿತು.

9.      ಅಶೋಕ್ ಮೆಹ್ತಾ ಸಮಿತಿಯ ಶಿಫಾರಸ್ಸಿನಂತೆ ಕರ್ನಾಟಕ, ಆಂದ್ರ ಪ್ರದೇಶ ಮತ್ತು ಪಶ್ಚಿಮ ಬಂಗಳಾ ದಲ್ಲಿ ಪಂಚಾಯತ್ ರಾಜ್ ಸಂಸ್ಥೆಯನ್ನು ಸ್ಥಾಪಿಸಿದವು.

10.  ಅಶೋಕ್ ಮೆಹ್ತಾ ಸಮಿತಿಯು ಪಂಚಾಯಿತಿ ವಿಧ್ಯಾಮಾನಗಳನ್ನು ನೋಡಿಕೊಳ್ಳಲು ಪಂಚಾಯತ್ ರಾಜ್ ಸಂಸ್ಥೆಗೆ ಪಂಚಾಯತ್ ರಾಜ್ ಸಚಿವ ರನ್ನು ನೇಮಿಸಲು ಶಿಫಾರಸ್ಸು ಮಾಡಿತು.

11.  ಅಶೋಕ್ ಮೆಹ್ತಾ ಸಮಿತಿಯು ಚುನಾವಣೆಗಳನ್ನು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ನಡೆಸಬೇಕೆಂದು ಶಿಫಾರಸ್ಸು ಮಾಡಿತು.

12.  ಅಶೋಕ್ ಮೆಹ್ತಾ ಸಮಿತಿಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅವರ ಜನ ಸಂಖ್ಯೆಗೆ ಅನುಗುಣವಾಗಿ ಸೀಟುಗಳನ್ನು ಮೀಸಸಿಡಬೇಕೆಂದು ಶಿಫಾರಸ್ಸು ಮಾಡಿತು.

13.  ಅಶೋಕ್ ಮೆಹ್ತಾ ಸಮಿತಿಯು ಮಹಿಳೆಯರಿಗೆ 1/3 ರಷ್ಟು ಸ್ಥಾನಗಳನ್ನು ಮೀಸಲಿಡಬೇಕೆಂದು ಶಿಫಾರಸ್ಸು ಮಾಡಿತು.

14.  1959 ರಿಂದ 1964 ರ ಅವಧಿಯನ್ನು ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಾಬಲ್ಯ ಹಂತ ಎಂದು ಕರೆಯಲಾಗುತ್ತದೆ.

15.  1965 ರಿಂದ 1969 ರ ಅವಧಿಯನ್ನು ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದಂತೆ ಸ್ಥಗಿತತೆ ಅವಧಿ ಎಂದು ಕರೆಯಲಾಗುತ್ತದೆ.

16.  1969 ರಿಂದ 1977 ರ ಅವಧಿಯನ್ನು ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದಂತೆ ಇಳಿತದ ಅವಧಿ ಎಂದು ಕರೆಯಲಾಗುತ್ತದೆ.

Comments

Popular posts from this blog

ಸ್ವಾತಂತ್ರ್ಯ ಭಾರತದಲ್ಲಿ ಸ್ಥಳೀಯ ಸರ್ಕಾರಗಳು

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರ