ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರ
1. 1. ಋಗ್ವೇದ
ಕಾಲದಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರವನ್ನು “ ಸಭಾ ಮತ್ತು ಸಮಿತಿ ”
ಎಂದು ಕರೆಯುತ್ತಿದ್ದರು.
2. 2. ಮೌರ್ಯರ ಕಾಲದಲ್ಲಿ ಸ್ಥಳೀಯ ಸರ್ಕಾರವು
ಅಸ್ತಿತ್ವದಲ್ಲಿದ್ದವೆಂದು ವಿದೇಶಿ ರಾಯಭಾರಿ – “ ಮೇಗಸ್ತಾನೀಸ್ “ ನಿಂದ ತಿಳಿದು ಬರುತ್ತದೆ.
3. 3. “ ಇಂಡಿಕಾ “ - ಗ್ರಂಥದಲ್ಲಿ ಮೌರ್ಯರ ಕಾಲದಲ್ಲಿ ಗ್ರಾಮ ಪಂಚಾಯಿತಿಯು
ಅಸ್ತಿತ್ವದಲ್ಲಿದ್ದವೆಂದು ಹೇಳಲಾಗಿದೆ.
4. 4. “ ಚೋಳರ “ ಮನೆತನದ ಅವಧಿಯನ್ನು ಸ್ವಯಂ ಆಡಳಿತ ಸುವರ್ಣ ಕಾಲ
ಎನ್ನುವರು.
5. 5. ಚೋಳರ ಕಾಲದಲ್ಲಿ
ಗ್ರಾಮಗಳಲ್ಲಿ ಮುಖಂಡರನ್ನು “ ಕಂದಾಯ “ ವಸೂಲಿ
ಮಾಡುವುದಕ್ಕೆ ನೇಮಿಸುತ್ತಿದ್ದರು.
6. 6. ಭಾರತದಲ್ಲಿ
ಮೊಟ್ಟ ಮೊದಲ ಮುನ್ಸಿಪಲ್ ಕಾರ್ಪೋರೇಷನ್ ರಾಯಲ್ ಚಾರ್ಟರ್ ನ್ನು ಬ್ರಿಟೀಷ್ ದೊರೆ – “ ಜೇಮ್ಸ್ – 2 “ ಘೋಷಣೆ
ಮಾಡಿದರು.
7. 7. ಭಾರತದಲ್ಲಿ “ 1687 ಡಿಸೆಂಬರ್
30 “ ರಲ್ಲಿ
ಮದ್ರಾಸ್ ಕಾರ್ಪೋರೇಷನ್ ರಾಯಲ್ ಚಾರ್ಟರನ್ನು ಘೋಷಿಸಿದರು.
8. 8.ಭಾರತದ ಮೊಟ್ಟ
ಮೊದಲ ಮುನ್ಸಿಪಲ್ ಕಾರ್ಪೋರೇಷನ್ ನ್ನು “ 1688 “ ರಲ್ಲಿ
ಉದ್ಘೋಷಿಸಲಾಯಿತು.
9. 9.ಭಾರತದಲ್ಲಿ ಮೊದಲ ಮುನ್ಸಿಪಲ್ ಕಾರ್ಪೋರೇಷನ್ ಸ್ಥಾಪನೆಯಾದ ಸ್ಥಳ – ಮದ್ರಾಸ್.
10.ಮದ್ರಾಸ್ ಮುನ್ಸಿಪಲ್ ಕಾರ್ಪೋರೇಷನ್ ನ್ನು ಪ್ರಸ್ತುತ “ ಚೈನ್ನೈ” ಮುನ್ಸಿಪಾಲ್ ಕಾರ್ಪೋರೇಷನ್ ಎಂದು ಕರೆಯುತ್ತಾರೆ.
1111. “ ಚೈನ್ನೈ” ಮುನ್ಸಿಪಾಲ್ ಕಾರ್ಪೋರೇಷನ್ ಅಧಿಕೃತವಾದ ಹೆಸರು – ಗ್ರೇಟರ್ ಚೆನ್ನೈ
ಕಾರ್ಪೋರೇಷನ್.
1212.ಪ್ರಪಂಚದ ಮೊದಲ
ಕಾರ್ಪೋರೇಷನ್ ಸ್ಥಾಪನೆಯಾಗಿದ್ದು – ಲಂಡನ್ ನಲ್ಲಿ.
1313.ಪ್ರಪಂಚದ ದ್ವಿತೀಯ
ಹಳೆಯ ಕಾರ್ಪೋರೇಷನ್ – ಗ್ರೇಟರ್ ಚೆನ್ನೈ ಕಾರ್ಪೋರೇಷನ್.
1414. ಭಾರತದಲ್ಲಿ
1776 ರಲ್ಲಿ “
ಬಾಂಬೆ ಮತ್ತು ಕಲ್ಕತ್ತಾ ” ಕಾರ್ಪೋರೇಷನ್ ನ್ನು ಸ್ಥಾಪನೆ ಮಾಡಲಾಯಿತು.
1515.ಭಾರತದಲ್ಲಿ 1870 ರಲ್ಲಿ “ ಲಾರ್ಡ್ ಮಯೋಸ್ “ ರವರು ಸ್ಥಳೀಯ ಮಟ್ಟದಲ್ಲಿ ಆಡಳಿತ ವಿಕೇಂದ್ರೀಕರಣವನ್ನು
ಜಾರಿಗೆ ತಂದರು.
1616.ಸ್ಥಳೀಯ
ಸಂಸ್ಥೆಗಳ ಪಿತಾಮಹಾ ಎಂದು – ವೈಸ್ ರಾಯ್ ಲಾರ್ಡ್ ರಿಪ್ಪನ್ ನ್ನು ಕರೆಯುತ್ತಾರೆ.
1717.18 ಮೇ 1882
ರಲ್ಲಿ ವೈಸ್ ರಾಯ್ ಲಾರ್ಡ್ ರಿಪ್ಪನ್ ರವರು ಸ್ಥಳೀಯ ಸರ್ಕಾರಕ್ಕೆ ಸಂಬಂಧಿಸಿದ ಘೋಷಣೆ
ಹೊರಡಿಸಿದರು.
1818. 18 ಮೇ 1882
ರಲ್ಲಿ ಹೊರಡಿಸಿದ ಸ್ಥಳೀಯ ಸರ್ಕಾರಗಳ ಘೋಷಣೆಯನ್ನು – ಭಾರತದ ಸ್ಥಳೀಯ ಸರ್ಕಾರಗಳ ಮ್ಯಾಗ್ನಕಾರ್ಟ್
ಎಂದು ಕರೆಯುವರು.
1919.ಭಾರತದಲ್ಲಿ “ ಸ್ಥಳೀಯ ನಿಧಿ ಅಥವಾ
ಲೋಕಲ್ ಫಂಡ್ “ ಎಂಬ ಪರಿಕಲ್ಪನೆಯು – 1862 ರಲ್ಲಿ ಜಾರಿಗೆ
ಬಂದಿತು.
2020.1862 ರಿಂದ 1903 ರ ಕಾಲವಧಿಯನ್ನು ಆಧುನಿಕ
ವ್ಯವಸ್ಥೆಯ ಉತ್ತುಂಗದ ಅವಧಿ ಎಂದು ಕರೆಯುತ್ತಾರೆ.
2121.1884 ರಲ್ಲಿ ಬ್ರಿಟೀಷ್ ಸರ್ಕಾರ ಲೋಕಲ್ ಫಂಡ್ ಸಮಿತಿಯನ್ನು
ನೇಮಿಸಿತು.
Comments
Post a Comment