Posts

ಸುರೇಂದ್ರ ಕುಮಾರ್ ಡೇ

  1.       ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಪಂಚಾಯತ್ ರಾಜ್ ಸಚಿವರಾಗಿ “ ಸುರೇಂದ್ರ ಕುಮಾರ್ ಡೇ ” ರವರು ಕಾರ್ಯನಿರ್ವಹಿಸಿದರು. 2.       “ ಸುರೇಂದ್ರ ಕುಮಾರ್ ಡೇ ” ರವರನ್ನು ಸ್ವತಂತ್ರ ಭಾರತದಲ್ಲಿ ಸಮುದಾಯದ ಅಭಿವೃದ್ಧಿಗೆ ಪ್ರವರ್ತಕ ಮತ್ತು ಮಾರ್ಗದರ್ಶನ ನೀಡಿದ ವ್ಯಕ್ತಿ ಎಂದು ನೆನಪಿಸಿಕೊಳ್ಳುತ್ತಾರೆ. 3.       “ ಸುರೇಂದ್ರ ಕುಮಾರ್ ಡೇ ” ರವರು ಸರ್ಕಾರಿ ನೌಕರರಿಂದ ಪ್ರಜಾಪ್ರಭುತ್ವವನ್ನು ಆಚರಣೆಗೆ ತರಲು ಸಾಧ್ಯವಿಲ್ಲ ಎಂದು ಅವರು ದೃಢವಾಗಿ ನಂಬಿದ್ದರು ಮತ್ತು ಪ್ರಜಾಪ್ರಭುತ್ವದ ಫಲವು ಪ್ರತಿ ಹಳ್ಳಿಗೂ ತಲುಪಬೇಕು ಎಂದು ಒತ್ತಿ ಹೇಳಿದರು . 4.       SK ಡೇ ಅವರು 13 ಸೆಪ್ಟೆಂಬರ್ 1906 ರಂದು ಇಂದಿನ   ಬಾಂಗ್ಲಾದೇಶದ   ಸಿಲ್ಹೆಟ್   ಜಿಲ್ಲೆಯ ಲಕ್ಷ್ಮಿಬಸ್ಸಾ ಗ್ರಾಮದಲ್ಲಿ ಜನಿಸಿದರು , 5.       “ ಸುರೇಂದ್ರ ಕುಮಾರ್ ಡೇ ” ರವರು ಭಾರತ ಸರ್ಕಾರದ ಪುನರ್ವಸತಿ ಸಚಿವಾಲಯದ ಗೌರವ ತಾಂತ್ರಿಕ ಸಲಹೆಗಾರರಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು . 6.       ಎಸ್.ಕೆ.ಡೇ ರವರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮವನ್ನು ಅಧ್ಯಯನ ಮಾಡಲು ಸ್ಥಾಪಿಸಲಾದ ಬಲವಂತರಾಯ್ ಮೆಹ...

ಅಶೋಕ್ ಮೆಹ್ತಾ ಸಮಿತಿ

1.       ಕೇಂದ್ರದಲ್ಲಿ ಜನತಾ ಸರ್ಕಾರವು ಪಂಚಾಯತ್ ರಾಜ್ ಸಂಸ್ಥೆಗೆ ಸಂಬಂಧಿಸಿದಂತೆ ಡಿಸೆಂಬರ್ – 1977 ರಲ್ಲಿ – ಅಶೋಕ್ ಮೆಹ್ತಾ ಸಮಿತಿಯನ್ನು ರಚಿಸಿತು. 2.         ಅಶೋಕ್ ಮೆಹ್ತಾ ಸಮಿತಿಯು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸಲು ಆಗಸ್ಟ್ – 1978   ರಲ್ಲಿ ತನ್ನ ವರದಿಯನ್ನು ನೀಡಿತು. 3.       ಅಶೋಕ್ ಮೆಹ್ತಾ ಸಮಿತಿಯು ತನ್ನ ವರದಿಯಲ್ಲಿ “ 132 ” ಶಿಫಾರಸ್ಸುಗಳನ್ನು ಮಾಡಿತು. 4.       ಅಶೋಕ್ ಮೆಹ್ತಾ ಸಮಿತಿಯು ತನ್ನ ವರದಿಯಲ್ಲಿ ತನ್ನ ವರದಿಯಲ್ಲಿ “ ಎರಡು ಹಂತ ” ದ ಪಂಚಾಯಿತಿಗಳನ್ನು ಶಿಫಾರಸ್ಸು ಮಾಡಿತು. 5.       ಅಶೋಕ್ ಮೆಹ್ತಾ ಸಮಿತಿಯನ್ನು ನೇಮಕ ಮಾಡಿದ ಸರ್ಕಾರದಲ್ಲಿ ಪ್ರಧಾನ ಮಂತ್ರಿಗಳು – ಮೊರಾರ್ಜಿ ದೇಸಾಯಿ ರವರು ಆಗಿದ್ದರು. 6.       ಅಶೋಕ್ ಮೆಹ್ತಾ ಸಮಿತಿಯು ಎರಡು ಹಂತದ ಪಂಚಾಯತ್ “    ಮಂಡಲ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ” . 7.       ಅಶೋಕ್ ಮೆಹ್ತಾ ಸಮಿತಿಯ ವರದಿಯಂತೆ “ ಬ್ಲಾಕ್ ಹಂತದ ” ಪಂಚಾಯಿತಿಯನ್ನು ತೆಗೆದು ಹಾಕಲಾಯಿತು. 8.       ಅಶೋಕ್ ಮೆಹ್ತಾ ಸಮಿತಿಯ ಶಿಫಾರಸ್ಸಿನಂತೆ ಮಂಡಲ ಪಂಚ...

ಕೆ. ಸಂತಾನಮ್ ಸಮಿತಿ

  1.       1963 ರಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸು ವಿಕೇಂದ್ರೀಕರಿಸಲು “ ಕೆ.ಸಂತಾನ್ ಸಮಿತಿ ” ಯನ್ನು ರಚಿಸಲಾಯಿತು. 2.       ಕೆ.ಸಂತಾನಮ್ ಸಮಿತಿಯು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸು ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ “ ಪಂಚಾಯತಿಗಳ ಭೂ ಕಂದಾಯ ಮತ್ತು ಮನೆ ತೆರಿಗೆಗಳನ್ನು ವಸೂಲಿ ಮಾಡುವುದು ” , “ ರಾಜ್ಯ ಮಟ್ಟದ ಅನುದಾನಗಳನ್ನು ಪಂಚಾಯತ್ ಸಂಸ್ಥೆಗೆ ವರ್ಗಾಯಿಸಬೇಕು. ” ಹಾಗೂ “ ಪಂಚಾಯತ್ ರಾಜ್ ಹಣಕಾಸು ಸಹಕಾರ ಸಂಸ್ಥೆಯನ್ನು ಸ್ಥಾಪಿಸಬೇಕು. ” 3.       1962 ರಲ್ಲಿ ಲಾಲ್ ಬಹದ್ದೂರು ಶಾಸ್ತ್ರೀಯವರು ಕೆ.ಸಂತಾನಮ್ ರವರನ್ನು ಭ್ರಷ್ಟಚಾರ ವಿರೋಧಿ ಸಮಿತಿಯ ಅಧ್ಯಕ್ಷರನ್ನಾಗಿ ನೇಸಿಮಿದ್ದರು. 4.       ಕೆ.ಸಂತಾನಮ್ ರವರು 1946 ರಿಂದ ಭಾರತೀಯ ಸಂವಿಧಾನ ಸಭೆಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

ಸ್ವಾತಂತ್ರ್ಯ ಭಾರತದಲ್ಲಿ ಸ್ಥಳೀಯ ಸರ್ಕಾರಗಳು

1.       ಭಾರತದ ಸಂವಿಧಾನದ “ 40 ನೇ ವಿಧಿ ” ಪಂಚಾಯಿತಿಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಯಿತು. 2.       ಭಾರತದ ಸಂವಿಧಾನ “ 4ನೇ ಭಾಗ ” ದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. 3.       ಭಾರತದ ಸಂವಿಧಾನದಲ್ಲಿ ಪಂಚಾಯತ್ ರಾಜ್ ಸ್ಥಾಪನೆಗೆ ಸಂಬಂಧಿಸಿದಂತೆ “ ರಾಜ್ಯ ನಿರ್ದೇಶಕ ತತ್ವಗಳ ” ವಿಷಯದ ಅಡಿಯಲ್ಲಿ ಪ್ರಸ್ತಾಪಿಸಲಾಗಿದೆ. 4.       ಸ್ವತಂತ್ರ ಭಾರತದಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯ ಕ್ರಮಗಳನ್ನು “ 2 ಅಕ್ಟೋಬರ್ 1952 ” ರಲ್ಲಿ ಆರಂಭಿಸಲಾಯಿತು. 5.         ಸ್ವತಂತ್ರ ಭಾರತದಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ವಿಸ್ತರಣಾ ಕಾರ್ಯಕ್ರಮವನ್ನು “1953” ರಲ್ಲಿ ಪ್ರಾರಂಭಿಸಲಾಯಿತು. 6.       “ ಬಲವಂತ್ ರಾಯ್ ಮೆಹ್ತಾ ಸಮಿತಿ ” ಸಮುದಾಯ ಅಭಿವೃದ್ಧಿ ಮತ್ತು ರಾಷ್ಟ್ರೀಯ ವಿಸ್ತರಣಾ ಕಾರ್ಯಕ್ರಮವನ್ನು ಅಧ್ಯಯನ ಮಾಡಲು ಮತ್ತು ಪಂಚಾಯಿತಿಗಳ ಸ್ಥಾಪನೆಗೆ ಶಿಫಾರಸ್ಸು ನೀಡಲು ನೇಮಕಗೊಂಡ ಆಯೋಗವಾಗಿದೆ. 7.       ಸ್ವತಂತ್ರ ಭಾರತದಲ್ಲಿ ಪಂಚಾಯತ್ ರಾಜ್ ಗೆ ಸಂಬಂಧಿಸಿದಂತೆ ಮೊಟ್ಟ ಮೊದಲ ಬಾರಿಗೆ ನೇಮಕಗೊಂಡ ಆಯೋಗ “ ಬಲವಂತ್ ರಾಯ್ ಮೆಹ್ತಾ ಸಮ...